Love Calculator Blogger Script Free Download
ಹಲೋ ಫ್ರೆಂಡ್ಸ್ ಇವತ್ತಿನ ಈ ಆರ್ಟಿಕಲ್ ಮುಖಾಂತರ ನಾವು ತಿಳಿದುಕೊಳ್ಳೋಣ ನೀವು ಬ್ಲಾಗರ್ ಅಲ್ಲಿ ಯಾವ ರೀತಿ ಲವ್ ಕ್ಯಾಲ್ಕುಲೇಟರ್ ವೆಬ್ಸೈಟ್ ಅನ್ನು ಮಾಡಬಹುದು ಹಾಗೂ ಅದರಿಂದ ಹೇಗೆ ಹಣ ಸಂಪಾದನೆ ಮಾಡಬಹುದು ಎಂಬುದರ ಬಗ್ಗೆ.

ಮೊದಲನೆಯದಾಗಿ ಈ ರೀತಿಯ ವೆಬ್ಸೈಟ್ ಮಾಡಲು ನಿಮಗೆ ಸ್ಕ್ರಿಪ್ಟ್ ಗಳ ಅವಶ್ಯಕತೆ ಇರುತ್ತದೆ ಆ ಸ್ಕ್ರಿಪ್ಟ್ ಗಳನ್ನು ನಾವು ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ಡೌನ್ಲೋಡ್ ಮಾಡಬಹುದು.
ಅದೇ ರೀತಿ ಸ್ಕ್ರಿಪ್ಟನ್ನು ಎಡಿಟ್ ಮಾಡಲು ಹಾಗೂ ನಿಮ್ಮ ಯಾವುದೇ ಜಾಹೀರಾತುಗಳನ್ನು ಹಾಕಲು ನಮ್ಮ ಯುಟ್ಯೂಬ್ ಚಾನೆಲ್ WeBify ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಅದೇ ರೀತಿ ನಿಮಗೆ ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಸ್ಕ್ರಿಪ್ಟ್ ಎಡಿಟ್ ಮಾಡಲು ಈ ಕೆಳಗಿನ ವಿಡಿಯೋ ನೋಡಿ.
ಈಗ ನಿಮ್ಮ ವೆಬ್ಸೈಟ್ ರೆಡಿ ಆಗಿರಬಹುದು ಅಂತ ಅಂದುಕೊಳ್ಳುತ್ತೇವೆ. ಹಾಗಾದರೆ ಇದರಿಂದ ಹಣ ಸಂಪಾದನೆ ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳೋಣ. ಇಂತಹ ವೆಬ್ ಸೈಟ್ ಗಳಿಂದ ಹಣ ಸಂಪಾದಿಸಲು ನೀವು ಜಾಹೀರಾತುಗಳನ್ನು ತೋರಿಸಬೇಕಾಗುತ್ತದೆ. ಜಾಹೀರಾತುಗಳಿಗೆ ಸಂಬಂಧಿಸಿದಂತೆ ನೋಡಿದರೆ. ಗೂಗಲ್ ಆಡ್ಸೆನ್ಸ್ ತುಂಬಾನೇ ಒಳ್ಳೆಯ ಒಂದು ಆಯ್ಕೆ ಎನ್ನಬಹುದು. ಆದರೆ ಇಂತಹ ಸಿಂಗಲ್ ಪೇಸ್ ವೆಬ್ಸೈಟ್ಗಳಿಗೆ ಆಡ್ಸೆನ್ಸ್ ಅಪ್ಲೈ ಮಾಡುವುದು ಹಾಗೂ approval ಪಡೆಯುವುದು ತುಂಬಾ ಕಷ್ಟ. ಅದಕ್ಕಾಗಿ ನೀವು ನಿಮ್ಮ ಯಾವುದೇ ಆಡ್ಸೆನ್ಸ್ approve ಆಗಿರುವಂತಹ ಡೊಮೇನ್ ಅನ್ನು ಬಳಸಿ ಅಲ್ಲಿ ನಿಮ್ಮ ಆಡ್ಸೆನ್ಸ್ ಜಾಹೀರಾತುಗಳನ್ನು ಪ್ರಕಟಿಸಬಹುದು ಮತ್ತು ಹಣ ಸಂಪಾದನೆ ಮಾಡಬಹುದು.
ಆಡ್ಸೆನ್ಸ್ approval ಇರುವ ಡೊಮೈನ್ ಇಲ್ಲದಿದ್ದರೆ ಏನು ಮಾಡುವುದು ?
ಅಡ್ಸೆನ್ಸೆ ಅಪ್ರೋವಲ್ ಇರುವ ಡೊಮೇನ್ ಇಲ್ಲದಿದ್ದರೆ ನೀವು ಬೇರೆ ಜಾಹೀರಾತು ಕಂಪನಿಗಳನ್ನು ಬಳಸಬಹುದು. ಆದರೆ ಕೆಲವೊಂದು ಜಾಹೀರಾತು ಕಂಪನಿಗಳು ಸಿಂಗಲ್ ಪೇಸ್ ವೆಬ್ಸೈಟ್ಗಳಿಗೆ ಜಾಹೀರಾತುಗಳನ್ನು ಕೊಡುವುದಿಲ್ಲ ಅದೇರೀತಿ ಇನ್ನು ಕೆಲವು ಜಾಹೀರಾತು ಕಂಪನಿಗಳು ಸರಿಯಾದ ರೀತಿಯಲ್ಲಿ Earning ಕೊಡುವುದಿಲ್ಲ.
Read This : Best ad network ಇಲ್ಲಿ ನೋಡಿ
ಲವ್ ಕ್ಯಾಲ್ಕುಲೇಟರ್ ಸ್ಕ್ರಿಪ್ಟ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
Download
ಕೊನೆಯ ಮಾತು
ಗೆಳೆಯರೇ ಕೊನೆಯದಾಗಿ ಕೆಲವು ಮಾತುಗಳನ್ನು ಹೇಳಲು ಇಷ್ಟಪಡುತ್ತೇವೆ ಅದೇನೆಂದರೆ ಇಂತಹ ವೆಬ್ಸೈಟ್ಗಳಿಗೆ ಗೂಗಲ್ ಹಾಗೂ ಗೂಗಲ್ ತರಹದ ಸರ್ಚ್ ಎಂಜಿನ್ ಗಳಿಂದ ಟ್ರಾಫಿಕ್ ಬರುವುದು ತುಂಬಾ ಕಷ್ಟ. ಒಂದುವೇಳೆ ಸರ್ಚ್ ಎಂಜಿನ್ ಗಳಿಂದ ಬಂದರೆ ಅದು ನಿಮ್ಮ ಅದೃಷ್ಟ. ಒಂದು ವೇಳೆ ಸರ್ಚ್ ಎಂಜಿನ್ ಗಳಿಂದ ಟ್ರಾಫಿಕ್ ಬಂದಿಲ್ಲ ಎಂದಾದಲ್ಲಿ ನೀವು ನಿಮ್ಮ ವೆಬ್ಸೈಟನ್ನು ವಾಟ್ಸಪ್ ಫೇಸ್ಬುಕ್ ಇಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುವ ಮುಖಾಂತರ ಟ್ರಾಫಿಕ್ ಅನ್ನು ತರಬಹುದು ಹಾಗೂ ಹಣ ಸಂಪಾದನೆ ಮಾಡಬಹುದು. ಅದೇ ರೀತಿ ಸ್ಕ್ರಿಪ್ಟ್ ಗಳಲ್ಲಿ ಕೆಲಸ ಮಾಡುವುದರೊಂದಿಗೆ ಒಂದು ಸಂಪೂರ್ಣ ವೆಬ್ ಸೈಟನ್ನು ಕೂಡ ಮಾಡಿಕೊಂಡು ಅದರಲ್ಲಿ ಆರ್ಟಿಕಲ್ ಗಳನ್ನು ಬರೆಯುವುದು ಹಾಗೂ ಒಳ್ಳೆಯ ರೀತಿಯ ಕೆಲಸ ಮಾಡುವುದು ನಿಮ್ಮ ಬ್ಲಾಗಿಂಗ್ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ನೀಡಬಲ್ಲದು.
0 Comments