ಹಲೋ ಫ್ರೆಂಡ್ಸ್ ಇವತ್ತಿನ ಈ ಒಂದು ಆರ್ಟಿಕಲ್ ನಲ್ಲಿ ಬ್ಲಾಗಿಂಗ್ ಅಂದರೆ ಏನು ಮತ್ತು ಅದರಿಂದ ಹಣ ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇನೆ. ದಯವಿಟ್ಟು ಈ ಆರ್ಟಿಕಲ್ ಸಂಪೂರ್ಣವಾಗಿ ಹಾಗೂ ಗಮನವಿಟ್ಟು ಓದಿ. ಯಾಕೆಂದರೆ ಒಂದು ವೇಳೆ ನೀವು ಏನಾದರೂ ಒಂದು ಸಣ್ಣ ಮಾಹಿತಿಯನ್ನು ಮಿಸ್ ಮಾಡಿಕೊಂಡರೆ ನಿಮ್ಮ ಬ್ಲಾಗ್/ವೆಬ್ಸೈಟ್ ಇಂದ ಹಣ ಸಂಪಾದಿಸುವುದು ಸಾಧ್ಯವಾಗದೆ ಇರಬಹುದು.
ಉದಾಹರಣೆಗೆ : Adsense, Media.net, Taboola, Clickadu, A Ads, ಇನ್ನೂ ಹಲವಾರು.
ಜಾಹೀರಾತು ಕಂಪನಿಗಳನ್ನು ಬಳಸಲು ಇಷ್ಟವಿಲ್ಲ ಎಂದಾದರೆ ನೀವು sponsorship ಅಥವಾ ಅಫಿಲಿಯೇಟ್ ಮಾರ್ಕೆಟಿಂಗ್ ಕೂಡ ಮಾಡಬಹುದು.
ಉದಾಹರಣೆಗೆ : Amazon Affiliate marketing, Flipkart Affiliate marketing,
ಬ್ಲಾಗಿಂಗ್ ಅಂದರೆ ಏನು ?
ಬ್ಲಾಗಿಂಗ್ ಅಂದರೆ ಆನ್ಲೈನಲ್ಲಿ ನಿಮಗೆ ತಿಳಿದಿರುವ ಯಾವುದೇ ವಿಚಾರವನ್ನು ಸಾಹಿತ್ಯದ/ಲೇಖನದ ರೂಪದಲ್ಲಿ ಇನ್ನೊಬ್ಬರ ಬಳಿಗೆ ತಲುಪಿಸುವುದು ಆಗಿದೆ. ಇದರಲ್ಲಿ ನೀವು ಯಾವುದೇ ವಿಚಾರವನ್ನು ವಿವರಿಸಬಹುದು. ಬ್ಲಾಗಿಂಗ್ ಮಾಡಲು ನೀವು ಗೂಗಲ್ ಕಡೆಯಿಂದ ಉಚಿತವಾಗಿ ಕೊಡಲಾಗಿರುವ ಬ್ಲಾಗರ್(Blogger) ಅಥವಾ ಹಣ ಕೊಟ್ಟು ಹೋಸ್ಟಿಂಗ್ ಖರೀದಿಸಿಕೊಂಡು ವರ್ಡ್ಪ್ರೆಸ್(Wordpress) ಅನ್ನು ಕೂಡ ಬಳಸಬಹುದು. ಹೋಸ್ಟಿಂಗ್ ಅಂದರೆ ಏನು ಎಂಬುದರ ಬಗ್ಗೆ ನಾವು ಮುಂಬರುವ ದಿನಗಳಲ್ಲಿ ತಿಳಿದುಕೊಳ್ಳೋಣ.ಬ್ಲಾಗಿಂಗ್ ಮಾಡಲು ಏನೇನು ಬೇಕಾಗಿದೆ ?
ಉಚಿತವಾಗಿ ಬ್ಲಾಗರ್‌ನಿಂದ ಬ್ಲಾಗಿಂಗ್ ಮಾಡುವುದಾದರೆ ನಿಮ್ಮ ಬಳಿ ಒಂದು ಗೂಗಲ್ ಅಥವಾ ಜಿಮೇಲ್ ಖಾತೆ(Gmail Account) ಇದ್ದರೆ ಸಾಕಾಗುತ್ತದೆ.ಬ್ಲಾಗಿಂಗ್ ಯಾವ ವಿಷಯದ ಮೇಲೆ ಮಾಡಬಹುದು ?
ಬ್ಲಾಗಿಂಗ್ ಅನ್ನು ಇಂತಹದ್ದೆ ವಿಷಯದ ಮೇಲೆ ಮಾಡಬೇಕು ಎಂಬ ಯಾವುದೇ ಕಾನೂನು ಇಲ್ಲ. ನೀವು ನಿಮಗೆ ತಿಳಿದಿರುವ ಹಾಗೂ ಕಾನೂನಿನ ಪ್ರಕಾರ ಲೀಗಲ್ ಆಗಿರುವ ಯಾವುದೇ ವಿಷಯದ ಮೇಲೆ ಬ್ಲಾಗಿಂಗ್ ಪ್ರಯಾಣವನ್ನು ಪ್ರಾರಂಭ ಮಾಡಬಹುದು.ಬ್ಲಾಗಿಂಗ್ ಮಾಡುವಾಗ ನೆನಪಿಡಬೇಕಾದ ಕೆಲವು ಅಂಶಗಳು.
ನೀವು ಯಾವುದೇ ವಿಷಯದ ಮೇಲೆ ಬ್ಲಾಗಿಂಗ್ ಮಾಡುತ್ತೀರಾ ಅಂದರೆ ಅದರ ಬಗ್ಗೆ ಸ್ವಲ್ಪ ರಿಸರ್ಚ್/ವಿಮರ್ಶೆ ಮಾಡುವುದು ಒಳಿತು. ಯಾಕೆಂದರೆ ತುಂಬಾ ವಿಷಯದ ಮೇಲೆ ಈಗಾಗಲೇ ಪೈಪೋಟಿ ಜಾಸ್ತಿ ಇದೆ. ನೀವು ಒಂದು ವೇಳೆ ತಪ್ಪಾಗಿ ಜಾಸ್ತಿ ಪೈಪೋಟಿ ಇರುವ ವಿಷಯವನ್ನು ಆಯ್ದುಕೊಂಡಲ್ಲಿ ನಿಮ್ಮ ಬ್ಲಾಗ್ ವೆಬ್ ಸೈಟನ್ನು ಗೂಗಲ್ ಅಥವಾ ಬೇರೆ ಯಾವುದೇ ಸರ್ಚ್ ಎಂಜಿನ್ ಅಲ್ಲಿ Rank ಮಾಡುವುದು ಕಷ್ಟವಾಗಬಹುದು. ಅದಕ್ಕಾಗಿ ನೀವು ಬ್ಲಾಗಿಂಗ್ ಪ್ರಾರಂಭಿಸಬೇಕೆಂದಿದ್ದರೆ ಅತಿ ಕಡಿಮೆ ಪೈಪೋಟಿ ಇರುವಂತಹ ವಿಷಯವನ್ನು ಆಯ್ದುಕೊಳ್ಳಿ.ಬ್ಲಾಗಿಂಗ್ನಿಂದ ಹಣ ಸಂಪಾದನೆ ಹೇಗೆ ಸಾಧ್ಯ ?
ಬ್ಲಾಗಿಂಗ್ನಿಂದ ಹಣ ಸಂಪಾದಿಸಲು ನೀವು ಬೇರೆಬೇರೆ ಜಾಹೀರಾತು ಕಂಪನಿಗಳನ್ನು ಬಳಸಬಹುದು.ಉದಾಹರಣೆಗೆ : Adsense, Media.net, Taboola, Clickadu, A Ads, ಇನ್ನೂ ಹಲವಾರು.
ಜಾಹೀರಾತು ಕಂಪನಿಗಳನ್ನು ಬಳಸಲು ಇಷ್ಟವಿಲ್ಲ ಎಂದಾದರೆ ನೀವು sponsorship ಅಥವಾ ಅಫಿಲಿಯೇಟ್ ಮಾರ್ಕೆಟಿಂಗ್ ಕೂಡ ಮಾಡಬಹುದು.
ಬ್ಲಾಗಿಂಗ್ನಿಂದ ಸ್ಫೋನ್ಸರ್ಷಿಪ್ ಹೇಗೆ ಸಾಧ್ಯ ?
ಬ್ಲಾಗಿಂಗ್ ಅಲ್ಲಿ ಸ್ಫೋನ್ಸರ್ಷಿಪ್ ಪಡೆಯಬೇಕು ಎಂದಿದ್ದಾರೆ ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್ ಅಲ್ಲಿ ಒಳ್ಳೆಯ ಟ್ರಾಫಿಕ್ ಇರಬೇಕಾಗುತ್ತದೆ. ತುಂಬಾ ಕಂಪನಿಗಳು ಬೇರೆ ಬೇರೆ ವಿಷಯದ ಮೇಲೆ ಬೇರೆಬೇರೆ ವೆಬ್ಸೈಟ್ಗಳಿಗೆ ಸ್ಫೋನ್ಸರ್ಷಿಪ್ ಅನ್ನು ಒದಗಿಸುತ್ತವೆ. ಮುಂಬರುವ ದಿನಗಳಲ್ಲಿ ನಾವು ಈ ಸ್ಫೋನ್ಸರ್ಷಿಪ್ ಬಗ್ಗೆ ತಿಳಿದುಕೊಳ್ಳೋಣ.ಬ್ಲಾಗಿಂಗ್ ನಿಂದ ಅಫಿಲಿಯೇಟ್ ಮಾರ್ಕೆಟಿಂಗ್ ಹೇಗೆ ಸಾಧ್ಯ ?
ಬ್ಲಾಗಿಂಗ್ ಅಲ್ಲಿ ಅಫಿಲಿಯೇಟ್ ಮಾರ್ಕೆಟಿಂಗ್ ಮಾಡಬೇಕು ಎಂದಿದ್ದರೆ ನೀವು ಯಾವ ವಿಷಯದ ಮೇಲೆ ನಿಮ್ಮ ಆರ್ಟಿಕಲ್ ಬರೆದಿರುತ್ತೀರಿ ಆ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಸ್ತುವಿನ ಲಿಂಕ್ ಅನ್ನು ನೀವು ಕೊಡಬಹುದು. ನೀವು ಕೊಟ್ಟಿರುವ ಲಿಂಕ್ ಇಂದ ಯಾರಾದರೂ ಆ ವಸ್ತುವನ್ನು ಖರೀದಿಸಿದಲ್ಲಿ ನಿಮಗೆ ಅದರ ಕಮಿಷನ್ ಸಿಗುತ್ತದೆ.ಉದಾಹರಣೆಗೆ : Amazon Affiliate marketing, Flipkart Affiliate marketing,
0 Comments