What is SEO in Kannada

ಹಲೋ ಫ್ರೆಂಡ್ಸ್ ಇವತ್ತಿನ ಈ ಒಂದು ಆರ್ಟಿಕಲ್ ಮುಖಾಂತರ ನಾವು SEO ಅಂದರೆ ಏನು ಹಾಗೂ SEO ದ ವಿಧಗಳನ್ನು ತಿಳಿದುಕೊಳ್ಳೋಣ. 

What is SEO in Kannada

SEO ಅಂದರೆ ಏನು ? 

SEO ಪದದ ಪೂರ್ಣ ರೂಪ Search Engine Optimization. Search Engine optimization ಅಂದರೆ ಗೂಗಲ್ ಅಥವಾ ಬೇರೆ ಯಾವುದೇ ಸರ್ಚ್ ಇಂಜಿನ್ ನಲ್ಲಿ ನಿಮ್ಮ ಬ್ಲಾಗ್/ವೆಬ್ಸೈಟ್ ಅನ್ನು ಅಪ್‌ಡೇಟ್ ಮಾಡುವುದು ಅಥವಾ ಗೂಗಲ್‌ನಂತಹ ಸರ್ಚ್ ಇಂಜಿನ್ ಗಳಿಗೆ ನಿಮ್ಮ ಬ್ಲಾಗ್/ವೆಬ್ಸೈಟ್ ಇದೆ ಎನ್ನುವುದನ್ನು ತೋರಿಸಿಕೊಡುವುದಾಗಿದೆ. ಯಾಕೆಂದರೆ ಈ ಕೆಲಸವನ್ನು ಮಾಡುವುದರಿಂದ ಸರ್ಚ್ ಇಂಜಿನ್ ಗಳಿಗೆ ನಿಮ್ಮ ಬ್ಲಾಗ್/ವೆಬ್ಸೈಟ್ ಬಗ್ಗೆ ತಿಳಿಯುತ್ತದೆ ಹಾಗೂ ಅದು ಬೇರೆಯವರಿಗೆ ನಿಮ್ಮ ಬ್ಲಾಗ್/ವೆಬ್ಸೈಟ್ ಅನ್ನು Recommend ಮಾಡುತ್ತದೆ. 

SEO ಮಾಡುವುದರಿಂದ ಏನು ಲಾಭ ? 

SEO ಮಾಡುವುದರಿಂದ ಸರ್ಚ್ ಇಂಜಿನ್ ಗಳಿಗೆ ನಿಮ್ಮ ಒಂದು ವೆಬ್ಸೈಟ್ ಅಥವಾ ಬ್ಲಾಗ್ ಬಗ್ಗೆ ತಿಳಿಯುತ್ತದೆ ಹಾಗೂ ಅದು ಬೇರೆ ಬಳಕೆದಾರರಿಗೆ ನಿಮ್ಮ ವೆಬ್ಸೈಟ್ ಅನ್ನು Recommend ಮಾಡಲು ಸಹಾಯವಾಗುತ್ತದೆ. ಅದೇ ರೀತಿ ನಿಮ್ಮ ವೆಬ್ಸೈಟ್ಗೆ ಟ್ರಾಫಿಕ್ ಅಥವಾ ಬಳಕೆದಾರರು ಬರಲು ಸಹಾಯವಾಗುತ್ತದೆ. ಹಾಗೂ ಇದರಿಂದ ನೀವು ಕೂಡ ನಿಮ್ಮ ವೆಬ್ಸೈಟ್ನಲ್ಲಿ ಜಾಹೀರಾತುಗಳನ್ನು ತೋರಿಸುವ ಮುಖಾಂತರ ಹಣ ಸಂಪಾದನೆ ಮಾಡಬಹುದು. 

ಯಾವ ಯಾವ ರೀತಿಯ SEO ಗಳು ಇದೆ ? 

1 On Page SEO 
2 Off Page SEO 
ಇವು SEO ದ ವಿಧಗಳು. 

On page SEO ಅಂದರೆ ಏನು ? 

On page SEO ಅಂದರೆ ನಿಮ್ಮ ವೆಬ್ಸೈಟ್ ಅಲ್ಲಿ ಯಾವುದೇ ರೀತಿಯ ವಿಷಯದ ಕುರಿತು ಲೇಖನವನ್ನು ಬರೆಯುವಾಗ ಅಲ್ಲಿ ಮಾಡಬೇಕಾದಂತಹ ಕೆಲಸ ಅಂದರೆ ಸರ್ಚ್ ಡಿಸ್ಕ್ರಿಪ್ಶನ್ ಅದೇ ರೀತಿ ಸರಿಯಾದ Keyword ಬಳಸುವುದು. ಇನ್ನು ಹಲವಾರು. 

Off page SEO ಅಂದರೆ ಏನು ? 

Off page SEO ಅಂದರೆ ನಿಮ್ಮ ವೆಬ್ಸೈಟ್ ಹೊರಗಿನಿಂದ ಮಾಡಬೇಕಾದಂತಹ ಕೆಲಸ. ಅಂದರೆ ಲೇಖನವನ್ನು ಬರೆದ ನಂತರ ಅದನ್ನು ಗೂಗಲ್ ಅಲ್ಲಿ ಅಪ್ಡೇಟ್ ಮಾಡುವುದು ಅದೇ ರೀತಿ ಬ್ಯಾಕ್ಲಿಂಕ್ ಕ್ರಿಯೇಟ್ ಮಾಡುವುದು ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಈ ರೀತಿಯಾದಂತಹ ತುಂಬಾ ಕೆಲಸಗಳನ್ನು ಮಾಡಬೇಕಾಗುತ್ತದೆ. 

ಕೊನೆಯ ಮಾತು 

SEO ಬಗ್ಗೆ ಇವಿಷ್ಟು ಮಾಹಿತಿ ನಿಮಗೆ ತುಂಬಾನೇ ಸಹಾಯ ಮಾಡಿದೆ ಅಂತ ಅಂದುಕೊಂಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಹಾಗೂ Video Tutorialಗಾಗಿ ನಮ್ಮ YouTube Channel WeBify ಅನ್ನು Subscribe ಮಾಡುವುದು ಮರೆಯಬೇಡಿ. ಹಾಗೆಯೇ ನಿಮಗೆ ಏನಾದರೂ Doubts ಇದ್ದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧ.

Post a Comment

0 Comments