What is Sitemap in Kannada

What is Sitemap in Kannada

ಹಲೋ ಫ್ರೆಂಡ್ಸ್ ಇವತ್ತಿನ ಒಂದು ಆರ್ಟಿಕಲ್ ಮುಖಾಂತರ ನಾವು ಸೈಟ್-ಮ್ಯಾಪ್ ಅಂದರೆ ಏನು ಮತ್ತು ಹೇಗೆ ಅದನ್ನು ಕ್ರಿಯೇಟ್ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.  
What is Sitemap in Kannada



ಸೈಟ್-ಮ್ಯಾಪ್ ಅಂದರೆ ಏನು ? 

Sitemap ಅಂದರೆ ಯಾವುದೇ ಒಂದು ಬ್ಲಾಗ್ ಅಥವಾ ವೆಬ್ ಸೈಟಿನ ಒಂದು ಪೂರ್ಣರೂಪದ ನಕ್ಷೆ ಎಂದು ಹೇಳಬಹುದು. ಯಾಕೆಂದರೆ ಇದು ಒಂದು ವೆಬ್ಸೈಟ್ ಅಥವಾ ಬ್ಲಾಗ್ ನ ಪರಿಪೂರ್ಣವಾದ ರೂಪವನ್ನು ಅಥವಾ ಅದರಲ್ಲಿರುವ ವಿಷಯದ ಕುರಿತು ಗೂಗಲ್ ತರಹದ ಸರ್ಚ್ ಎಂಜಿನ್ ಗಳಿಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತದೆ. ಇದರಿಂದ ಯಾವುದೇ ಒಂದು ಬ್ಲಾಗ್ ವೆಬ್ಸೈಟ್ ಅನ್ನು ಗೂಗಲ್ ಬಳಕೆದಾರರಿಗೆ ತೋರಿಸಲು ಸಹಾಯವಾಗುತ್ತದೆ. 


ಸೈಟ್ಮ್ಯಾಪ್ ರಚಿಸುವುದು ಹೇಗೆ ? 

ಸೈಟ್-ಮ್ಯಾಪ್ ಅನ್ನು ಕ್ರಿಯೇಟ್ ಮಾಡಲು ತುಂಬಾ ಫ್ರೀ ಆಗಿರುವಂತಹ ಟೂಲ್ ಗಳು ಇಂಟರ್ನೆಟ್ನಲ್ಲಿ ಲಭ್ಯವಿದೆ. ಈ ಒಂದು ಟೂಲ್ ಗಳನ್ನು ಬಳಸಿಕೊಂಡು ಸೈಟ್ ಮ್ಯಾಪ್ ಅನ್ನು ರಚಿಸಬಹುದು ಅಥವಾ ಕ್ರಿಯೇಟ್ ಮಾಡಬಹುದು.  


ಸೈಟ್-ಮ್ಯಾಪ್ ಯಾಕೆ ಅಗತ್ಯ ? 

ಯಾವುದೇ ಒಂದು ಪ್ರದೇಶಕ್ಕೆ ಅಥವಾ ನಿಮಗೆ ತಿಳಿದಿರದಂತಹ ಜಾಗಕ್ಕೆ ಭೇಟಿ ನೀಡುವಾಗ ನೀವು ಸಾಮಾನ್ಯವಾಗಿ ಗೂಗಲ್ ಮ್ಯಾಪ್ ಅನ್ನು ಬಳಸುತ್ತೀರಾ. ಯಾಕೆಂದರೆ ಅದು ನಿಮಗೆ ಅಲ್ಲಿನ ಸರಿಯಾದ ಮಾಹಿತಿಯನ್ನು ಅದೇರೀತಿ ನೀವು ತಲುಪಬೇಕಾದ ಪ್ರದೇಶವನ್ನು ನಿಖರವಾಗಿ ತಿಳಿಸುತ್ತದೆ. ಅದೇ ರೀತಿ ಗೂಗಲ್ ನಂತಹ ಸರ್ಚ್ ಎಂಜಿನ್ ಗಳು ನಿಮ್ಮ ಸೈಟ್ಮ್ಯಾಪ್ ಅನ್ನು ಬಳಸಿಕೊಂಡು ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್ನಲ್ಲಿ ಏನೇನಿದೆ ಹಾಗೂ ಎಲ್ಲಿದೆ ಹಾಗೂ ಬಳಕೆದಾರರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಯಾವ ವಿಷಯವನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎಂಬುದನ್ನು ತಿಳಿದುಕೊಳ್ಳುತ್ತದೆ. ಒಂದು ವೇಳೆ ವೆಬ್ ಸೈಟಿನ ಸೈಟ್-ಮ್ಯಾಪ್ ಇಲ್ಲವೆಂದಾದಲ್ಲಿ ನಿಮ್ಮ ವೆಬ್ಸೈಟ್ ಅನ್ನು ಗೂಗಲ್ ಅಥವಾ ಬೇರೆ ಯಾವುದೇ ಸರ್ಚ್ ಎಂಜಿನ್ ಯಾವುದೇ ಕಾರಣಕ್ಕೂ index ಮಾಡಲಾರದು. ಒಂದು ವೇಳೆ ನಿಮ್ಮ ವೆಬ್ಸೈಟ್ ಗೂಗಲ್ ಅಥವಾ ಬೇರೆ ಸರ್ಚ್ ಎಂಜಿನ್ ಅಲ್ಲಿ index ಆಗಿಲ್ಲ ಎಂದಾದರೆ ನಿಮ್ಮ ವೆಬ್ಸೈಟ್ಗೆ ಟ್ರಾಫಿಕ್ ಬರಲಾರದು. ಅದೇ ರೀತಿ ಟ್ರಾಫಿಕ್ ಇಲ್ಲ ಎಂದಾದಲ್ಲಿ ನೀವು ನಿಮ್ಮ ವೆಬ್ಸೈಟ್ನಿಂದ ಹಣ ಸಂಪಾದನೆ ಮಾಡುವುದು ಸಾಧ್ಯವಾಗದಿರಬಹುದು. ಈ ಕಾರಣಕ್ಕೆ ಸೈಟ್ಮ್ಯಾಪ್ ಕ್ರಿಯೇಟ್ ಮಾಡುವುದು ಅದೇರೀತಿ ಗೂಗಲ್ಗೆ ಅದನ್ನ ತೋರಿಸಿಕೊಡುವುದು ತುಂಬಾನೇ ಮುಖ್ಯವಾಗಿದೆ. 

ಸೈಟ್-ಮ್ಯಾಪ್ ಕ್ರಿಯೇಟ್ ಮಾಡುವುದು ಹೇಗೆ ಎಂಬುದನ್ನು ವಿಡಿಯೋ ಟುಟೋರಿಯಲ್ ಮುಖಾಂತರ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ. 


ಸೈಟ್-ಮ್ಯಾಪ್ ಕ್ರಿಯೇಟ್ ಮಾಡುವ ವಿಧಾನ 

ಸೈಟ್-ಮ್ಯಾಪ್ ಕ್ರಿಯೇಟ್ ಮಾಡಲು ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್ನಲ್ಲಿ ಕಡಿಮೆಯೆಂದರೂ 5 ಮುಖ್ಯವಾಗಿ ಇರುವಂತಹ ಪೇಜ್ ಗಳು ಅದೇ ರೀತಿ ನೀವು ಯಾವ ಯಾವ ವಿಷಯಗಳನ್ನು ನಿಮ್ಮ ವೆಬ್ ಸೈಟಿನ ಮೆನುವಿನಲ್ಲಿ ಹಾಕಿರುತ್ತೀರ ಅದರ ಕುರಿತಾದಂತಹ ಕೆಲವು ಪೋಸ್ಟ್ಗಳನ್ನು ಅಂದರೆ ಆರ್ಟಿಕಲ್ ಗಳನ್ನು ಹಾಕುವುದು ಕೂಡ ತುಂಬಾನೇ ಅಗತ್ಯ. ಒಂದು ವೇಳೆ ನಿಮ್ಮ ವೆಬ್ಸೈಟ್ನಲ್ಲಿ ಯಾವುದೇ ಆರ್ಟಿಕಲ್ ಅಥವಾ ಯಾವುದೇ ಪೇಜ್ ಗಳು ಇಲ್ಲವೆಂದಾದಲ್ಲಿ ನಿಮ್ಮ ಸೈಟ್ಮ್ಯಾಪ್ ಕ್ರಿಯೇಟ್ ಆಗದೇ ಇರಬಹುದು. 

ಇದನ್ನೂ ಓದಿ : SEO ಅಂದರೆ ಏನು

Step 1 : ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ವಿಸಿಟ್ ಮಾಡಿ ನೀವು ನಿಮ್ಮ ಸೈಟ್-ಮ್ಯಾಪ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ. 


Click Here

Step 2 : ಸೈಟ್-ಮ್ಯಾಪ್ ಕ್ರಿಯೇಟ್ ಆದನಂತರ ಅದನ್ನು ಕಾಪಿ ಮಾಡಿಕೊಂಡು ನಿಮ್ಮ ವೆಬ್ಸೈಟ್ ಸೆಟ್ಟಿಂಗ್ಸ್ ಅಲ್ಲಿ Custom Robot.txt ಜಾಗದಲ್ಲಿ ಹಾಕಿ Save ಮಾಡಿ. 



Step 3 : ಅದಾದನಂತರ ನಿಮ್ಮ ವೆಬ್ಸೈಟ್ ಅಡ್ರೆಸ್ ಅನ್ನು ಬಿಟ್ಟು ಉಳಿದ atom.xml ಇಂದ ಕೊನೆಯ 500 ರವರೆಗೂ ಕಾಪಿ ಮಾಡಿ ಅದನ್ನು ಗೂಗಲ್ webmaster tool ಅಲ್ಲಿ ಹಾಕಿ submit ಮಾಡಿ. 




ಕೊನೆಯ ಮಾತು 

Sitemap ಬಗ್ಗೆ ಇವಿಷ್ಟು ಮಾಹಿತಿ ನಿಮಗೆ ತುಂಬಾನೇ ಸಹಾಯ ಮಾಡಿದೆ ಅಂತ ಅಂದುಕೊಂಡಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಹಾಗೂ Video Tutorialಗಾಗಿ ನಮ್ಮ YouTube Channel WeBify ಅನ್ನು Subscribe ಮಾಡುವುದು ಮರೆಯಬೇಡಿ. ಹಾಗೆಯೇ ನಿಮಗೆ ಏನಾದರೂ Doubts ಇದ್ದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ ನಿಮ್ಮ ಸಹಾಯಕ್ಕೆ ನಾವು ಸದಾ ಸಿದ್ಧ.

Post a Comment

0 Comments